ಕೊಲೋನ್ 1

ಹಾಂಡುರಾಸ್ ರಾಜ್ಯದ ಪೂರ್ವದಲ್ಲಿ ಕ್ಯಾರಿಬೀಯನ್ ಸಮುದ್ರ ತೀರದಲ್ಲಿರುವ ಒಂದು ವಿಭಾಗ. ವಿಸ್ತೀರ್ಣ 3,426 ಚ.ಮೈ. ಜನಸಂಖ್ಯೆ 40,570 (1961). ಅದರ ನೆಲ ಬಹುತೇಕ ತಗ್ಗಾಗಿದೆ. ವಾರ್ಷಿಕ ಮಳೆ 100"ಗಿಂತ ಅಧಿಕ. ಫಲವತ್ತಾದ ಹಾಗೂ ಮಳೆ ಕಡಿಮೆ ಇರುವ ಕಣಿವೆಯಲ್ಲೂ ವಾಯುವ್ಯದ ಕಡೆಯ ಸಮುದ್ರದಂಚಿನ ಬಯಲುಗಳಲ್ಲೂ ಜನವಸತಿ ಹೆಚ್ಚು. ಈ ವಿಭಾಗದ ವಾಯವ್ಯದಲ್ಲಿ ಬತ್ತ, ಕೆಸವಿನ ಗೆಡ್ಡೆ, ಗೆಣಸು ಮತ್ತು ಬಾಳೆ ಹೆಚ್ಚಾಗಿ ಬೆಳೆಯುತ್ತವೆ. ಅವನ್ನೂ ಚೌಬೀನೆಯನ್ನೂ ಟ್ರೂಹೀವೋ ಈ ಮೂಲಕವೂ ಪ್ವೆರ್ಟೊ ಕಸ್ಟೀಲ್ಯಾದಿಂದಲೂ ರಫ್ತು ಮಾಡುತ್ತಾರೆ. ಟ್ರೂಹೀವೋ ಈ ವಿಭಾಗದ ಮುಖ್ಯ ಪಟ್ಟಣ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ